ನಂಜುಂಡನಿಗೆ ಪ್ರಥಮ ಪ್ರತಿ
Posted date: 16/June/2010

ಅಮಿತ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುಭಾಷ್ ಕೂರ್ಗ್ ಹಾಗೂ ವಿ.ಕೆ. ಜಿಂದಾಲ್ ನಿರ್ಮಿಸುತ್ತಿರುವ ನಂಜನಗೂಡು ನಂಜುಂಡ ಚಿತ್ರಕ್ಕೆ ಡಿ.ಟಿ.ಎಸ್. ಅಳವಡಿಸುವ ಕಾರ್ಯಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಪುರ್ಣಗೊಂಡಿದ್ದು, ಕಳೆದ ಮಂಗಳವಾರ ಚಿತ್ರದ ಪ್ರಥಮ ಪ್ರತಿ ಕೂಡ ಹೊರ ಬಂದಿದೆ. ಪಯಣದಲ್ಲಿ ಮುಗ್ದ ಅಭಿನಯದಿಂದ ಪ್ರೇಕ್ಷಕರನ್ನು ಗೆದ್ದ ರವಿಶಂಕರ್, ಇಲ್ಲಿ ನಂಜುಂಡನಾಗಿದ್ದಾರೆ. ಯಶಸ್ವೀ ಪ್ರಚಂಡ ರಾವಣ ಪೌರಾಣಿಕ ನಾಟಕವನ್ನು ಚಲನಚಿತ್ರ ರೂಪಕ್ಕೆ  ತಂದಂತಹ ಶ್ರೀನಿವಾಸ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಮಲಯಾಳಂ ಚಿತ್ರವೊಂದರ ಕನ್ನಡ ಅವತರಣಿಕೆಯಾದ ಈ ಚಿತ್ರ ಮಾನಸಿಕ ದೌರ್ಬಲ್ಯವುಳ್ಳ ವ್ಯಕ್ತಿಯೊಬ್ಬನ ಕಥೆಯಾಗಿದ್ದು, ಮಲಯಾಳಂ ಬೆಡಗಿ ಹಂಸಿಣಿ ನಂಜುಂಡನ ಹೆಂಡತಿ ಪಾತ್ರ ನಿರ್ವಹಿಸಿದ್ದಾಳೆ. ಆಕೆ ಸುಂದರಿಯಾಗಿರುವುದೇ ನಾಯಕನಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಸೈಕಾಲಜಿ ಹಾಗೂ ಹಾಸ್ಯ ಚಿತ್ರದ ಪ್ರಮುಖ ಅಂಶಗಳಾಗಿದ್ದು, ಚಿತ್ರದ ೫ ಹಾಡುಗಳಿಗೆ ಕೆ.ವಿ. ರವಿಚಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್. ಗಿರಿ ಸಹಾಯಕರಾಗಿದ್ದ ಸುರೇಶ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಇದ್ದು, ಮೈಸೂರು, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಪಾಂಡವಪುರ, ಕೆ.ಆರ್.ಎಸ್. ಗಳಲ್ಲಿ ಶೂಟಿಂಗ್ ನಡೆದಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed